ಸೀಳು ತುಟಿಯ ಬಗ್ಗೆ ಕೇಳಿದ್ದೀರಾ?

ಸೀಳು ತುಟಿ(Cleft lip)

ಮೇಲಿನ ತುಟಿಯ ಭಾಗದಲ್ಲಿ ಸೀಳಿಕೊಂಡಿದ್ದರೆ ಅದನ್ನು ಸೀಳು ತುಟಿ ಮತ್ತು ಸೀಳು ಅಂಗುಳ ಎಂದು ಕರೆಯಬಹುದು. ಮುಖದ ರಚನೆಯು ಸರಿಯಾಗಿ ಬೆಳವಣಿಗೆಯಾಗದಿದ್ದರೆ ಈ ಸಮಸ್ಯೆ ಉಂಟಾಗುತ್ತದೆ. ಇದನ್ನು ಸಾಮಾನ್ಯವಾಗಿ ಜನ್ಮದೋಷ ಅಂತಲೇ ಕರೆಯುತ್ತಾರೆ . ಯಾಕಂದ್ರೆ ಇದು ಹುಟ್ಟುವಾಗಲೇ ಬರುವಂತಹ ಸಮಸ್ಯೆ. ಇದು ಹೆಚ್ಚಾಗಿ ಕೆಲವು ಆನುವಂಶಿಕ ಪರಿಸ್ಥಿತಿಗಳು(genetic condition) ಅಥವಾ ಯಾವುದಾದರು ಸಿಂಡ್ರೋಮ್‌ನಿಂದ ಉಂಟಾಗುತ್ತದೆ.

Cleft Lip Surgery From SurgeryXchange

ಲಕ್ಷಣಗಳು

 • ತುಟಿಯಲ್ಲಿನ ಒಡಕು – ತುಟಿ ಮೇಲಿನ ಒಸಡು ಮತ್ತು ಅಂಗುಳಿನ ಮೂಲಕ ತುಟಿಯನ್ನು ಮೂಗಿನ ಕೆಳಭಾಗಕ್ಕೆ ವಿಸ್ತರಿಸುತ್ತದೆ.
 • ಮುಖದ ಮೇಲೆ ಪರಿಣಾಮ ಬೀರುವ ಹಾಗೆ ಬಾಯಿಯ ಮೇಲಿನ ತುಟಿಯಲ್ಲಿ ಒಂದು ಬಿರುಕು ಕಾಣಿಸಿಕೊಳ್ಳುತ್ತದೆ.
 •  ಆಹಾರ ಸೇವನೆಯಲ್ಲಿ ಸಮಸ್ಯೆಗಳು.
 • ಮೂಗಿನ ಮೂಲಕ ಮಾತನಾಡುತ್ತಾರೆ.
 • ಕಿವಿ ಸೋಂಕು.

ಕಾರಣಗಳು

ಸಾಮಾನ್ಯವಾಗಿ, ಗರ್ಭಧಾರಣೆಯ ಎರಡನೇ ಮತ್ತು ಮೂರನೇ ತಿಂಗಳುಗಳಲ್ಲಿ ತುಟಿ ಮತ್ತು ಅಂಗುಳನ್ನು ಬೆಸೆಯುವ ಅಂಗಾಂಶಗಳು ಸರಿಯಾಗಿ ಬೆಸೆಯದಿದ್ದಾಗ ಇವು ಸಂಭವಿಸುತ್ತವೆ.ಸೀಳು ತುಟಿ ಮತ್ತು ಸೀಳು ಅಂಗುಳವು ಆನುವಂಶಿಕ ಮತ್ತು ಸುತ್ತಲಿನ ವಾತಾವರಣದಿಂದ ಉಂಟಾಗುತ್ತದೆ.

ಅಪಾಯಕಾರಿ ಅಂಶಗಳು

ಸೀಳು ತುಟಿ ಮತ್ತು ಸೀಳು ಅಂಗುಳವು ವಿವಿಧ ಕಾರಣಗಳಿಂದ ಉಂಟಾಗಬಹುದು :

 • ಜೀನ್‌ಗಳು: ಕುಟುಂಬದಲ್ಲಿ ಮೊದಲೇ ಯಾರಿಗಾದರೂ ಈ ಸೀಳು ತುಟಿ ಅಥವಾ ಅಂಗುಳಿನ ಸಮಸ್ಯೆ ಇದ್ದರೆ ಈ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
 • ಗರ್ಭಿಣಿಯಾಗಿದ್ದಾಗ ಕೆಲವು ಕೆಟ್ಟ ಹವ್ಯಾಸಗಳಿಂದ : ಗರ್ಭಾವಸ್ಥೆಯಲ್ಲಿ ಸಿಗರೇಟು ಸೇದುವುದು ಅಥವಾ ಮದ್ಯಪಾನ ಮಾಡುವುದರಿಂದ ಸೀಳು ತುಟಿ ಬೆಳೆಯಬಹುದು.
 • ಮಧುಮೇಹ(ಡಯಾಬಿಟಿಸ್): ಗರ್ಭಾವಸ್ಥೆಯಲ್ಲಿ ಮಹಿಳೆಗೆ ಮಧುಮೇಹ ಇರುವುದು ಪತ್ತೆಯಾದರೆ, ಸೀಳು ತುಟಿಯ ಸಮಸ್ಯೆ ಮಗುವಿನಲ್ಲಿ ಕಾಣಿಸಿಕೊಳ್ಳುವ ಅಪಾಯವಿದೆ.

ಶಸ್ತ್ರಚಿಕಿತ್ಸೆ(ಸರ್ಜರಿ)

ಸಮಸ್ಯೆಯ ತೀವ್ರತೆಯನ್ನು ಆಧರಿಸಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಈ ಸರ್ಜರಿಗೆ ಕ್ರಮಗಳಿದ್ದು,ಇದನ್ನು ಮಗುವಿನ ವಯಸ್ಸಿಗೆ ಅನುಗುಣವಾಗಿ ಮಾಡಲಾಗುತ್ತದೆ-

 • ಸೀಳು ತುಟಿಯನ್ನು ಸರಿಪಡಿಸಲು – 3 ರಿಂದ 6 ತಿಂಗಳ ವಯಸ್ಸಿನವರೆಗೆ ಮಾಡಬಹುದು.
 • ಸೀಳು ಅಂಗುಳನ್ನು ಸರಿಪಡಿಸಲು – 12 ತಿಂಗಳ ವಯಸ್ಸಿನವರೆಗೆ ಮಾಡಬಹುದು.
 • ನಂತರದ ಶಸ್ತ್ರಚಿಕಿತ್ಸೆಗಳು – 2 ವರ್ಷ ಮತ್ತು ಹದಿಹರೆಯದ ವರ್ಷಗಳ(ಟೀನ್ ಏಜ್ ) ನಡುವೆ ಮಾಡಬಹುದು.

ಕಾರ್ಯವಿಧಾನಗಳು (procedures):

ಸೀಳು ತುಟಿ ಸರಿಪಡಿಸಲು: ತುಟಿಗಳನ್ನು ಮುಚ್ಚಲು, ಸರ್ಜನ್ (ಡಾಕ್ಟರ್) ಸೀಳುಗಳ ಎರಡೂ ಬದಿಗಳಲ್ಲಿ ಕತ್ತರಿಸುತ್ತಾರೆ ಮತ್ತು ಅಂಗಾಂಶದ ಫ್ಲಾಪ್ ಮಾಡುತ್ತಾರೆ. ನಂತರ ಫ್ಲಾಪ್ಗಳನ್ನು ತುಟಿ ಸ್ನಾಯುಗಳಿಂದ ಹೊಲಿಯಲಾಗುತ್ತದೆ. ಸರಿಪಡಿಸಿದ ನಂತರ, ತುಟಿಯ ನೋಟವು ಸಾಮಾನ್ಯವಾಗುತ್ತದೆ ಮತ್ತು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಮೂಗನ್ನು ಸರಿಪಡಿಸುವ ಅಗತ್ಯವಿದ್ದರೆ, ಅದೇ ಸಮಯದಲ್ಲಿ ಸರಿ ಮಾಡಲಾಗುತ್ತದೆ.

ಸೀಳು ಅಂಗುಳನ್ನು ಸರಿಪಡಿಸಲು: ಮಗುವಿನ ಸ್ಥಿತಿಗೆ ಅನುಗುಣವಾಗಿ ಬಾಯಿಯ ಮೇಲಿನ ಭಾಗವನ್ನು ಬೇರ್ಪಡಿಸಲು ಮತ್ತು ಪುನರ್ ನಿರ್ಮಿಸಲು ಹಲವಾರು ಕಾರ್ಯವಿಧಾನಗಳಿವೆ. ಸರ್ಜನ್ ಸೀಳಿನ ಎರಡೂ ಬದಿಯಲ್ಲಿ ಕಟ್ ಮಾಡುತ್ತಾರೆ , ಅಂಗಾಂಶಗಳು ಮತ್ತು ಸ್ನಾಯುಗಳನ್ನು ಮರು-ಸ್ಥಾನದಲ್ಲಿರಿಸಿ ನಂತರ ಅದನ್ನು ಹೊಲಿಯಲಾಗುತ್ತದೆ.

ಖರ್ಚು

ನಿಮಗೆ ಸೀಳು ತುಟಿಯ ಸರ್ಜರಿ ಬೇಕಾಗಿದ್ರೆ ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯರೊಂದಿಗೆ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಜರಿ ಎಕ್ಸ್ ಚೇಂಜ್ ಸಹಾಯ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ www.surgeryxchange.com ಗೆ ಲಾಗಿನ್ ಮಾಡಿ ಅಥವಾ 7676045678 ಗೆ ಕಾಲ್ ಮಾಡಿ.

Leave a Reply